ಅವನ ಹೆಸರು ವೀರೇಶ ಅಂತ. ಸರ್ಕಾರಿ ಕಾಲೇಜೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಇಬ್ಬರು ಮಕ್ಕಳು, ಒಬ್ಬಳು ಹೆಂಡತಿ, ಇನ್ನೊಬ್ಬಳು ಹೆಂಡತಿ ಅಲ್ಲ. ಹಾಗಾಗಿಯೇ ಅವರಿಬ್ಬರು ಕಿತ್ತಾಡಿಕೊಂಡು ಈಗ ಇವನನ್ನ ಬಿಟ್ಟು ಹೋಗಿದ್ದಾರೆ. ಅದು ಬೇರೆ ಕತೆ, ಇನ್ನೊಮ್ಮೆ ಅದರ ಬಗ್ಗೆ ಹೇಳ್ತೀನಿ.
ಆ ಕಾಲೇಜಿನ ಹುಡುಗರೆಲ್ಲ ಹರೆಯವನ್ನ ಇನ್ನೇನು ಮುಗಿಸುವ ವಯಸ್ಸಿನವರು. co-ed. ವಾಡಿಕೆಯಂತೆ ಪ್ರೇಮಿಗಳು ಇರುತ್ತಿದ್ದರು. ಒಂದಾದ ಪ್ರೇಮಿಗಳು ಮರದ ಮೇಲೆ ತಮ್ಮ ಹೆಸರನ್ನ ಕೆತ್ತಿಕೊಂಡರೆ, one way ಪ್ರೇಮಿಗಳು ಯಾರೋ ಬರೆದಂತೆ ತಮ್ಮ ಹಾಗೂ ತಮ್ಮ ಭಾವೀ ಅಥವಾ ಅಭಾವಿ ಪ್ರೇಯಸಿಯ ಹೆಸರನ್ನ boardನ ಮೇಲೆ ಬರೆದುಕೊಳ್ಳುತ್ತಿದ್ದರು. ಇಂಥ ಪ್ರೇಮಿಗಳಿಗೆಲ್ಲ ವೀರೇಶ ಲವ್ ಗುರು. ಜೋಡಿ ಹುಡುಕಿ ಕೊಡೋದು, ಲವ್ ಲೆಟರ್ ಬರೆದುಕೊಡೋದು, break up ಆದಾಗ ಒಂದಾಗಿಸೋದು, ಈ ಥರದ್ದೆಲ್ಲ ಮಾಡುತ್ತಿದ್ದ. ಅದಕ್ಕೇನು ದುಡ್ಡು ಕೇಳುತ್ತಿರಲಿಲ್ಲ. ಸಂಜೆ ಸಮಯ party ಕೊಡಿಸಿದರೆ ಸಾಕಿತ್ತು.
ಕಾಲೇಜು ಹೇಗೋ ಹಾಗಿತ್ತು. ವಿಪರೀತ ಪಾಠ ಮಾಡುವ lecturers, ಕಾಲೇಜಿಗೆ ಬಂದರೂ long absent ನೀನು ಅನ್ನುವ principal, ಎಲ್ಲಾ ದಾಖಲೆ ಕೊಟ್ಟಿದ್ದರೂ ಏನೋ ಒಂದು ಕೊಂಕು ಹೇಳುವ clerk. ಇವರೆಲ್ಲರ ಮಧ್ಯೆ ಕಾಲೇಜಿನ ಏಕಮಾತ್ರ ಆಕರ್ಷಣೆಯಾಗಿ ಉಳಿದದ್ದು ವೀರೇಶಿ ಮಾತ್ರ. ಹುಡುಗರಿಗೆಲ್ಲ ಅವನನ್ನ ಕಂಡರೆ ಅಚ್ಚು ಮೆಚ್ಚು. ಹುಡುಗಿಯರಿಗೂ ಅಷ್ಟೆ. ಆಗಾಗ ಮೈ ಮುಟ್ಟಿ ಮಾತಾಡಿಸಿದ್ದಕ್ಕೆ ಒಂದಿಬ್ಬರು ಹೊಡೆದದ್ದು ಬಿಟ್ಟರೆ ಬೇರಿನ್ನೇನು caseಗಳಿರಲಿಲ್ಲ.
ಅದೊಂದು ದಿನ ಯಾವುದೋ company ಕಾರು ಬಂದು ಕಾಲೇಜಿನ ಮುಂದೆ ನಿಂತಿತು. ಅದರಿಂದ ಇಳಿದು ಬಂದ ಮೂವರು ಟೈ ಧಾರಿಗಳು ನೇರ ಆಫೀಸ್ ರೂಮಿಗೆ ಹೋಗಿ, ಪ್ರಿನ್ಸಿಪಾಲರ ಕೈಕುಲುಕಿ, ಏನೇನೋ ಮಾತಾಡುತ್ತಿರವಾಗ ಅವರಿಗೆ tea ಕೊಡಲು ವೀರೇಶಿ ಒಳಗೆ ಹೊದಾಗ ಗೊತ್ತಾಯಿತು, ಅವರು ಬಂದಿರೋದು ಕಾಲೇಜಿಗೆ ಕಂಪ್ಯೂಟರ್ ಕೊಡೋಕೆ ಅಂತ. ವಿಷಯ ತಿಳಿದ ಕೂಡಲೆ ತನ್ನ ನೆಚ್ಚಿನ ಗ್ಯಾಂಗ್ ಗೆ ತಿಳಿಸಿದ. ಸುದ್ದಿ ಹಬ್ಬಿತು. ಮರುದಿನ ಬೆಳಗ್ಗೆ ಪ್ರಿನ್ಸಿಪಾಲರು ''ಪ್ರಿಯ ವಿದ್ಯಾರ್ಥಿಗಳೆ, ನಿಮಗೆಲ್ಲ ವಂದು ಸಪ್ರೈಸ್...'' ಅಂದು ಈ ಮಾತು ಹೇಳಿದಾಗ ಯಾರೊಬ್ಬರೂ ತಮಾಷೆಗೂ surprise ಆಗಲೇ ಇಲ್ಲ.
ಒಂದು ವಾರದಲ್ಲಿ 5ಕಂಪ್ಯೂಟರ್ ಬಂತು. ಅವನ್ನ ಯಾರೆಂದರೆ ಅವರು ಮುಟ್ಟುವ ಹಾಗಿಲ್ಲ. ಅದರ ಜವಾಬ್ದಾರಿ ವೀರೇಶಿಯದ್ದು. ಅವನು ಹ್ಞೂಂಕರಿಸಿದರೆ ಮಾತ್ರ ಬಳಸಲಾಸ್ಪದ. ಹೀಗಿದ್ದ ಪರಿಸ್ಥಿಯಲ್ಲಿಯೇ, english ಟೀಚರ್ ಹೆದಳಿದರು ಅಂತ internet ಹಾಕಿಸಿದರು ಪ್ರಿನ್ಸಿಪಾಲ್.
ಕಾಲೇಜಿಗೆ internet ಬಂದ ಮೇಲೆ ಅದರ lookಕೇ ಬದಲಾಗಿ ಹೋಯ್ತು. ಯಾರೊಬ್ಬರೂ absent ಆಗಲಿಲ್ಲ. ಅದು ಇದು ಅಂತ download ಮಾಡುತ್ತಲೇ ಇದ್ದರು. ಅವಾವುವೂ ಪ್ರಯೋಜಕ್ಕೆ ಬರದ sylubus ಎಂಬುದು ವೀರೇಶನಿಗೆ ಗೊತ್ತಾಯಿತು. ಒಂದ ವಾರಗಳ ಬಳಿಕ ಪ್ರಿನ್ಸಿಪಲ್ ಊರಲ್ಲಿರಲಿಲ್ಲ, ಆಗ ವೀರೇಶಿ ಅದರಲ್ಲೂ buisiness ಮಾಡತೊಡಗಿದ. ವಿಡಿಯೋ ನೋಡೋದಾದರೆ ಗಂಟೆಗಿಷ್ಟು, print ಬೇಕಿದ್ದರೆ ಪೇಜಿಗಿಷ್ಟು ಅಂತ ರೇಟ್ ಫಿಕ್ಸ್ ಮಾಡಿದ. ಅದೇನು, ಕೇಳವಲ ಹತ್ತು ರೂಪಾಯಿ. ಯಾರೊಬ್ಬರಿಗೂ ಅದು costly ಎನಿಸಲಿಲ್ಲ. ವ್ಯಪಾರ ಶುರುವಾಯ್ತು.
ಸ್ವಲ್ಪ ದಿನವಾದ ಮೇಲೆ ವೀರೇಶಿಗೆ ತಾನೂ ವಿಡಿಯೋ ನೋಡಬೇಕು ಅನ್ನಿಸಿತು. ಯಾವೊಬ್ಬರೂ ಇರಲಿಲ್ಲ ಆ ಹೊತ್ತು. video site ತೆಗೆದ, 'kannada o' ಅಂತ ಒತ್ತುತ್ತಿದ್ದಂತೆಯೇ ಒಂದಷ್ಟು suggestion ಬಂತು. ಯಾವುದೋ ಒಂದನ್ನು ಒತ್ತಿದ. ಕನ್ನಡ ಹಳೇ ಹಾಡುಗಳ ಪಟ್ಟಿ ತೆರೆದುಕೊಂಡಿತು. ಚೆನಾಗೆನ್ನಿಸಿತು. ಹೀಗೆ ಕೆಲವು ವಿಡಿಯೋ ನೋಡುತ್ತಾ, ಹುಡುಕುತ್ತಿರುವಾಗ ಕಂಡಿತು '...hot photoshoot' ಅಂತ. ಅವಳು ನೆಚ್ಚಿನ ನಟಿ ಬೇರೆ. ತೆರೆದುಕೊಂಡಿತು ವಿಡಿಯೋ. ಪುಳಕಿತನಾಗಿ ಹೋದ ವೀರೇಶ! ಒಬ್ಬನೇ ಉದ್ಗರಿಸಿದ ''ಹ್ಞಾ!! ಇದೆಲ್ಲಾ ಇದರಲ್ಲೂ ಇರುತ್ತಾ...!!!''
free internet, ಕೇಳಬೇಕೆ? 8ಕ್ಕೆ ಬರುತ್ತಿದ್ದ ವೀರೇಶ 7ಕ್ಕೇ ಬಂದು ಬಾಗಿಲು ತೆಗೆದು ಇಂಟರ್ ನೆಟ್ ನೋಡುತ್ತಿದ್ದ. ಯಾವಾಗಲೂ ಎರಡು ಪೇಜ್ ಓಪನ್ ಇರುತ್ತಿತ್ತು. ಒಂದು ''...hot...'' ಇನ್ನೊಂದು ''images of god''! ಇದು ನಿತ್ಯದ ಕಥೆ. ಬರು ಬರುತ್ತಾ ವೀರೇಶಿಗೆ ಮಾತಿನ ವ್ಯಾಮೋಹ ಕಡಿಮೆಯಾಯ್ತು. ಯಾರೂ ತನ್ನ ಹತ್ತಿರ ಬಾರದಂತೆ ಮಾಡಿಕೊಂಡ, privacyಗಾಗಿ. ವೀರೇಶಿ ಪಕ್ಕ ಇರುತ್ತಿದ್ದದ್ದು ಅವನ ಖಾಸ ಶಿಶ್ಯವರ್ಗ ಮಾತ್ರ. ಅದು ವಿಡಿಯೋ ಮುಗಿಯೋ ತನಕ ಅಷ್ಟೆ.
ಗಣಿತದ ಮೇಷ್ಟ್ರಿಗೂ ಕೆಮಿಸ್ಟ್ರೀ ಟೀಚರ್ ಗೂ ಜಗಳ. periodic tableಗೆ ಹೊಸ ವಸ್ತು ಸೇರಿದೆ ಅಂತ ಆಯಪ್ಪ, ಸೇರಿಲ್ಲ ಅಂತ ಈಯಮ್ಮ. ಇನ್ನಾರು ಉತ್ತರಿಸಬಲ್ಲರು ಗೂಗಲಾಚಾರ್ಯರಲ್ಲದೆ? ಹೋದರು, ಕಂಪ್ಯೂಟರ್ ಲ್ಯಾಬಿಗೆ. ಅವರು ವೀರೇಶಿ ಕೂತಿದ್ದ ಕಡೆ ಹೋಗುತ್ತಿದ್ದಂತೆಯೇ ಎಲ್ಲಾ 'ಇಂಟೂ' ಒತ್ತಿ ತಡಬಡಿಸುತ್ತಾ ಮೇಲೆದ್ದು 'ಬನ್ನಿ ಸಾ...' ಅಂತ ಸೀಟು ಬಿಟ್ಟುಕೊಟ್ಟ. ಗಣಿತದವರು 'ನೋಡಿ ಮೇಡಂ, ಇದ್ರಲ್ಲಿರುತ್ತೆ' ಅಂತ search engine ತೆರೆಯುತ್ತಿದ್ದಂತೆಯೇ ಕಂಡವು, bikiniಯಾದಿ ಉಡುತೊಟ್ಟ ಲಲನೆಯರು. ಮೆಡಮ್ಮಿಗೆ ಸಿಟ್ಟು ಬಂತೋ, ನಾಚಿಕೆ ಬಂತೋ ಗೊತ್ತಿಲ್ಲ. 'ಯಾ ಓಗಿ ಸಾರ್' ಅಂತ ಗಣಿತದವರ ಬೆನ್ನು ಗುದ್ದಿ ಓಡಿದಳಯ. ಮೇಷ್ಟ್ರು ಇದೆಲ್ಲ ಇಲ್ಯಾಕೆ ಬಂತೋ ಗೊತ್ತಾಗದೆ ತಬ್ಬಿಬ್ಬಾದರು. ವೀರೇಶಿ ನಡುಗುತ್ತಿದ್ದ, ಮುಂದಿನ ಪರಿಣಾನವನ್ನ ನೆನೆಯುತ್ತ. ಮೇಷ್ಟ್ರು ವೀರೇಶಿಗೆ ದೈನ್ಯದಿಂದ ಹೇಳಿದರು ''ವೀರು, ನಂಗೂ ಇದುಕ್ಕೂ ಏನು ಸಂಭಂಧ ಇಲ್ವೋ. ಇನ್ನು ನಾನೇನೂ ನೋಡೇ ಇರಲಿಲ್ಲ. ಇದು ಹೇಗೆ ಬಂತೋ ಗೊತ್ತಿಲ್ಲ'' ಅಂತ ಅಳಲಿದರು. ವೀರೇಶೀ, 'ಸಾ... ಇದೆಲ್ಲ ಏನೂ ಮಾಡಾಕಾಗಲ್ಲ ಸಾ. ಇಂಟ್ರುನೆಟ್ಟಂದ್ರೆ ಇಂಗೇನೆ. ಏನಾರ ಒತ್ರಿ, ಇದೇ ಬರದು. ವಾಗಿ ಸಾ, ಏನೂ ಆಗಲ್ಲ' ಅಂದು ಭರವಸೆ ತುಂಬಿ ಕಳಿಸಿದ. ಸಧ್ಯ, ವೀರೇಶಿ ಮರ್ಯಾದೆ ಉಳಿಯಿತು, ಅಲ್ಲದೆ ಸುದ್ದಿ ಬೇರೆ, ಆ ಗಣಿತ ಮೇಷ್ಟ್ರು ಕೆಮಿಸ್ಟ್ರಿ ಮೇಡಮ್ಮು ಫ್ರೆಂಡ್ಸ್ ಆದ್ರೂ ಅಂತ. ಕಾರಣ ಗೊತ್ತಿರೋದು ವೀರೇಶಿಗೆ ಮಾತ್ರ.
ಒಂದೊಳ್ಳೆ ಮಳೆ ಬೀಳುತ್ತಿದ್ದ ಸಂಜೆ. ಹುಡುಗರೆಲ್ಲ ಕಂಪ್ಯೂಟರಲ್ಲಿ ಏನೋ project ಮಾಡಿಕೊಳ್ಳುತ್ತಿದ್ದರು. ವೀರೇಶಿ ಒಂಟಿಸಲಗದಂತೆ ಸುಖಸಾಗರಾನುಭವ ಪಡೆಯುತ್ತಿದ್ದ, ಅದು ಜಗದೇಕ ಸುಂದರಿಯರ ಸಮಕ್ಷಮದಲ್ಲಿ. ನೋಡುವಾಗ ಅದೇನು ಒತ್ತಿದನೋ ಏನೋ, ಕಂಪ್ಯೂಟರ್ ಒಂದು ಕ್ಷಣ 'ಚುರ್ರ್...' ಅಂದು ಆಫ್ ಆಗಿದ್ದು ಆನ್ ಆಗಲೇ ಇಲ್ಲ! ಹುಡುಗರು ಹೇಳಿದರು 'ವೈರಸ್ ಅಟಾಕ್ ಅಗೈತೆ' ಅಂತ. ವೀರೇಶಿಗೆ ಬೇಜಾತಾಯ್ತು, ಇಂಥದ್ದನ್ನ ನೋಡದೆ ಹೋದೆನಲ್ಲಾ ಅಂತ.
ಪ್ರಿನ್ಸಿಪಲ್ ಬಂದ ಕೂಡಲೇ ಮಾಡಬೇಕಿದ್ದ ಮೊದಲ ಕೆಲಸ techniciansನ ಕರೆಸಿ computer ಸರಿ ಮಾಡಿಸೋದು. ಅದಕ್ಕೆ ಕಂಪ್ಯೂಟರ್ ನೀಡಿದ್ದವರನ್ನೇ ಕರೆಸಿದ. ಪಾಪ, ಬಂದರು. ಒಂದು anti virus ಹಾಕಿಕೊಡಲು ಶುರು ಮಾಡಿದರು. ಅಷ್ಟರಲ್ಲೆ inspectionಗಾಗಿ ಇಬ್ಬರು officerಗಳು ಬಂದರು. ಅವರ ಜೊತೆ ಮಾತಾಡಬೇಕು ಅಂತಿದ್ದ ತನ್ನ ಸ್ನೆಹಿತರಿಬ್ಬರನ್ನೂ ಪ್ರಿನ್ಸಿಪಾಲರು ಕರೆಸಿದರು. ಮಾತು ಕತೆ meeting ಶುರುವಾಯ್ತು. ವೀರೇಶಿ ತನ್ನ ಪಾಡಿಗೆ ತಾನು 'ಇನ್ನು ಏನ್ ನೋಡೋದು ಬಾಕಿ ಇದೆ' ಅಂತ ಯೋಚಿಸುತ್ತಿದ್ದ. ಅತ್ತ, computer ರಿಪೇರಿ ಮಾಡುವ ಕಡೆಯಿಂದ ವಿಲಕ್ಷಣ ಹೆಣ್ಣಿನ ದನಿ ಕೇಳಿತು. ಇಡೀ ಸಭೆ ಅತ್ತ ಕಿವಿ ಹಾಯಿಸಿತು! ಆ ಅಪರಿಚಿತ ದನಿ ಅಲ್ಲಿ ಗೊತ್ತದ್ದದ್ದು ವೀರೇಶಿಗೆ ಮಾತ್ರ.
ಒಂದ ವೇಳೆ, ಆ computer ಸರಿ ಮಾಡುವವರು ತಾನು ನೋಡಿದ history ತೋರಿಸದೇ ಇದ್ದಿದ್ದರೆ 'ಸಾ...ಇದೆಲ್ಲ ಇಂಟ್ರುನೆಟ್ಟಲ್ಲಿ ಮಾಮೂಲಿ ಸಾ...' ಅಂದುಬಿಡುತ್ತಿದ್ದ ವೀರೇಶಿ. ಆದರೆ ಈಗ ಹಾಗಗಲ್ಲ. ಸಾಕ್ಷಿ ಸಮೇತ ಸಿಗೆ ಬಿದ್ದಿದ್ದ. ಮುಖ ಪೆಚ್ಚಾಯಿತು. ಪ್ರಿನ್ಸಿಪಾಲರಿಗೆ ಅವರೆಲ್ಲರ ಮುಂದೆ ಮರ್ಯಾದೆ ಹತವಾಯಿತು. ಕೃದ್ಧರಾಗಿಹೋದರು.
ಕಂಪ್ಯೂಟರ್ ಕೊಟ್ಟಿದ್ದವರು ''ನೀವು ತುಂಬಾ ಚೆನಾಗಿ use ಮಾಡಿಕೊಂಡಿರೋದು ಗೊತ್ತಾಗ್ತಾ ಇದೆ. ಸಾಕು. ಇಷ್ಟೇ ನಮ್ಮಿಂದಾಗೋದು'' ಅಂದು ಕಂಪ್ಯೂಟರ್ ಒತ್ತೊಯ್ದರು. ವೀರೇಶ ಅವರೆಲ್ಲರ ಕಣ್ಣುಗಳಲ್ಲಿ ಸಣ್ಣವನಾದ. ತನಗೇ ತಾನು ಹೇಳಿಕೊಳ್ಳಲೂ ಸಹ ಯಾವ ಸಮಾಧಾನವೂ ಕಾಣಲಿಲ್ಲ. ತಪ್ಪು ಮಾಡೋದು ತಪ್ಪಲ್ಲ, ಸಿಕ್ಕಿ ಹಾಕಿಕೊಳ್ಳುದು ತಪ್ಪು ಅನಿಸಿತು. ಎಲ್ಲರೂ ಹೋದರು. ವೀರೇಶಿ ಯಾರ ಮಾತನ್ನೂ ಕೇಳುವ ಅವಶ್ಯಕತೆತಿಲ್ಲವೆಂಬಂತೆ ಅಲ್ಲಿಂದ ಹೊರಟ. ಹೋಗುವಾಗ 'ಈ ವಯಸ್ಸಿನಲ್ಲಾದರೂ ಸ್ಕೂಲಿಗೆ ಬರೋದು ತಪ್ಪಿತಲ್ಲ' ಅಂದುಕೊಂಡ. computer ಕೋಣೆ ಮತ್ತೆ ಹಳೆ ಸಾಮಾನುಗಳ ಗೂಡಾಯಿತು.
ವೀರೇಶಿ ಕೆಲಸ ಕಳೆದುಕೊಂಡಿದ್ದ. ಆದರೆ ಕೈ ತುಂಬಾ ಹಣ ಮಾಡಿಕೊಂಡ. ಹೇಗಂತಿರಾ? ತಾನೇ ಒಂದು ಇಂಟರ್ ನೆಟ್ ಅಂಗಡಿಯಿಟ್ಟ. ಗಂಟೆಗೆ 40ರೂಪಾಯಿ. cityಗಿಂತ ಹತ್ತು ರುಪಾಯಿ ಜಾಸ್ತಿ. ಯಾಕೇಳಿ? ಇಲ್ಲಿ ಇದ್ದದ್ದು ಒಂದೇ ಇಂಟರ್ ನೆಟ್ಟು...
ನಾದೀ
No comments:
Post a Comment