ನಡುರಾತ್ರಿಯಲಿ...
ಮಧ್ಯ
ರಾತ್ರಿ. ಮಳೆ-ಗುಡುಗು-ಸಿಡಿಲು. ಯಾರೂ ನಡೆದಾಡದ
ಬೆಂಗಳೂರು-ಪುಣೆ ಹೆದ್ದಾರಿ. ಯಾವ ಗಾಡಿಯೂ ಆ ದಾರಿಯಲ್ಲಿ ಅಡ್ಡಾಡುತ್ತಿಲ್ಲ. cbz ಗಾಡಿಯಲ್ಲಿ ಬೆಂಗಳೂರಿನ ಕಡೆ ವೇಗವಾಗಿ
ಹೋಗುತ್ತಿದ್ದ ರಾಮು ಯಾವುದಾದರು ಡಾಭಾ ಅಥವ ಹೋಟೆಲ್ ಸಿಗಬಹುದೆಂಬ ಆಸೆಯಲ್ಲಿ ಸುರಿಮಳೆಗೂ ಜಗ್ಗದೆ
ಮುನ್ನುಗ್ಗುತ್ತಿದ್ದ. ಆದರೆ ಹತ್ತಾರು ಕಿಲೋಮೀಟರ್ ಮುಂದೆ ಬಂದರೂ ಯಾವ ತಾಣವೂ ಸಿಗಲಿಲ್ಲ. ಅವನ
ನಸೀಬು ಕೆಟ್ಟಿತ್ತೇನೋ, head light ಕೂಡ
ಇದ್ದಕ್ಕಿದ್ದಂತೆ ಕೆಟ್ಟು ಹೋಯಿತು. ರಾಮು ಗಾಡಿಯನ್ನ ಪಕ್ಕಕ್ಕೆ ಹಾಕಿದ. ಮಳೆ ಸೋರುತ್ತಿದ್ದ
ಆಗಸದ ಮಾಡಿನೆಡೆಗೆ ನೋಡಿದ. ಯಾವ ಚಂದ್ರ ಚುಕ್ಕಿಗಳು ಇವನಿಗಾಗಿ ಬೆಳಕು ಚೆಲ್ಲಲು ಅಲ್ಲಿರಲಿಲ್ಲ.
ಮಳೆ ಬರುತ್ತಿತ್ತಲ್ಲ ಅಷ್ಟಕ್ಕೇ ಆಕಾಶ ಕಪ್ಪಿರಲಿಲ್ಲ, ಅಂದು ಅಮವಾಸ್ಯೆ. ಶಶಿಗೆ ರಜೆ, ಅವನ ಸಖಿಯರಿಗೂ ರಜೆ.
ರಾಮು light ಹೊತ್ತಿಸಲು ಏನೇನೋ ಸರ್ಕಸ್ಸು ಮಾಡಿದ. ಅವನ
ಪ್ರಯತ್ನವೆಲ್ಲ ವ್ಯರ್ಥವಾಗುತ್ತಿತ್ತು. ಯಾವ wire ಎಲ್ಲಿ ಸಿಕ್ಕಿಸಬೇಕೋ ಗೊತ್ತಾಗಲಿಲ್ಲ. ಅಷ್ಟು ಕತ್ತಲು.
ಕೊನೆಗೆ mobile flash on ಮಾಡಿ
ಗಾಡಿ ಓಡಿಸಬಹುದ ಅಂತ trial ನೋಡಿದ.
flashನ ಬೆಳಕನ್ನೆಲ್ಲಾ
ಅಮಾಸೆಯ ಕತ್ತಲು ನುಂಗಿಬಿಟ್ಟಿತು. ಅವನು ಇದ್ಧದ್ದು ಸಿರಾದಿಂದ ಮುಂದಕ್ಕೆ,ಸಿರಾದಲ್ಲಿದ್ದ ಗೆಳೆಯನೊಬ್ಬನಿಗೆ ಕರೆ
ಮಾಡಿದರೆ help ಮಾಡಬಹುದೇನೋ
ಅಂದುಕೊಂಡು dial ಮಾಡಿ
ಕಿವಿ ಬಳಿ ಇಟ್ಟುಕೊಂಡ. ಆಕಡೆಯಿಂದ 3 beep ಕೇಳಿ call cut ಆಯ್ತು. ನೋಡಿದರೆ NO NETWORK. ಒಂದರ್ಧ ಗಂಟೆ ಆಯ್ತು.
ಒಂದೇ ಒಂದು ಗಾಡಿ ಕೂಡ ಆ ಮಾರ್ಗದಲ್ಲಿ ಬರಲಿಲ್ಲ. 'ಅರೆ, nh4 ಇದು. at least ಲಾರಿ ಆದ್ರು ಬರದ್ ಬೇಡ್ವ ಅವನ**' ಅಂತ ಬೈದುಕೊಂಡು ದಾರಿಕಾಯುತ್ತ, networkಗಾಗಿ mobilಅನ್ನ ಮೇಲೆ ಕೆಳಗೆ ಹಿಂದೆ ಮುಂದೆ ತೂಗುತ್ತಾ, ಮಳೆಯಲ್ಲಿ ನೆನೆಯುತ್ತಿದ್ದ.
ದೂರದಲ್ಲೊಂದು ಬೆಳಕು ಕಾಣಿಸಿತು. ಒಂದಿದ್ದಿದ್ದು
ಎರಡಾಯಿತು. ಹತ್ತಿರ ಬರುತ್ತಿರುವುದು ಖಾತ್ರಿಯಾಯ್ತು. ಅದು ಕಾರು. ರಾಮು bagನ್ನು ಹೆಗಲಿಗೆ ಹಾಕಿಕೊಂಡು dropಗೆ ಕೈ ಅಡಿಸುತ್ತಾ ನಿಂತ, ನಿಲ್ಲಿಸಬಹುದೇನೋ ಎಂಬ hopeಅಲ್ಲಿ. ಗಾಡಿ ಮುಂದಕ್ಕೇನೋ ಬರುತ್ತಿದೆ, ಆದರೆ ಆಗಿನಿಂದ ಇನ್ನೂ ಅಷ್ಟು ದೂರವಿದೆ!!
ಅಲ್ಲಿಂದ ಇಲ್ಲಿಗೆ ನಡೆದುಕೊಂಡೆ 3 ನಿಮಿಷಕ್ಕೆ ಬರಬಹುದು, ಆದರೆ ಈ ಕಾರು ಹತ್ತು ನಿಮಿಷದಿಂದಲೂ
ಬರುತ್ತಲೇ ಇದೆ. 'ಇನ್ನೆಷ್ಟು
ನಿಧಾನವಿರಬಹುದಪ್ಪಾ ಆ ಡೈವರ್ರು' ಅಂದುಕೊಂಡ ರಾಮು ಕೈಯಾಡಿಸುವುದನ್ನೇನು ಬಿಡಲಿಲ್ಲ.ಕರೀ
ಕಾರು ರಾಮುವಿನೆದುರು ನಿಂತಿತು. ರಾಮು ಕಣ್ ಕಣ್ಣು ಬಿಡುತ್ತಾ ಆ ಕಾರನ್ನು ನೋಡಿದ. ಅದು bmw! ರಾಮುಗೆ ಅದರಲ್ಲಿ ಹೋಗಬೇಕು ಎಂಬುದು ಜೀವಮಾನದ
ಆಸೆ, ಅದು ಈ ರೀತಿ
ಈಡೇರುವುದೆಂದು ಅವನು ಭಾವಿಸಿರಲಿಲ್ಲ. ಕಾರಿನ ಗಾಜು ಕೆಳಗಿಳಿಯಿತು. ರಾಮುವಿನ ಕಂಗಳು ಇನ್ನಷ್ಟು
ಅರಳಿತು. ಕರಿ ಕಾರಿನ ಒಳಗೆ ಬಿಳಿ ಹುಡುಗಿ! ಮೊಣಕಾಲು ಮಟ್ಟದ sleaveless single piece ಹಾಕಿಕೊಂಡು ಗಾಡಿ
ಓಡಿಸುತ್ತಾ ಕೂತಿದ್ದಾಳೆ. ರಾಮು ದಂಗಾಗಿದ್ದಾನೆ, ಆದರೆ ಅದನ್ನು ತೋರಿಸಿಕೊಳ್ಳಬಾರದ ಪ್ರಯತ್ನದಲ್ಲಿದ್ದಾನೆ.
ಕೇಳಿದಳು ಚೆಲುವೆ 'any problem?' ರಾಮು
ಆ ದನಿ ಕೇಳಿ ತನ್ನ fluent english ಮರತೇ
ಹೋದ
'bike light switch off, flash not showing root. rain fall heavy. single. you
drop' ಹುಡುಗಿ ಜೋರಾಗಿ
ನಕ್ಕು ಗಾಡಿಯ ಬಾಗಿಲನ್ನು ಕೇವಲ button ಅದುಮಿಯೇ ತೆಗೆಯುತ್ತಾ 'ಎಲ್ಲಿಗ್ ಹೋಗ್ಬೇಕು?' ಅಂದಳು. 'to ಬೆಂಗ್ಳೂರ್' ಅಂದು ತೆಪ್ಪಗೆ ಕುಳಿತ ರಾಮು.
bmw... ಜೀವಮಾನದಲ್ಲಿ ರಾಮು ಆ ಗಾಡಿ ಹತ್ತುತ್ತೇನೆ ಎಂಬ ಕನಸು
ಕಂಡಿರಲಿಲ್ಲ. ಕಾರನ್ನ ಮೇಲೆ ಕೆಳಗೆಲ್ಲ ಮಂಗನಂತೆ ಗಮನಿಸುತ್ತಿದ್ದ. ಮೆತ್ತಗಿನ seatಅನ್ನು ಮುಟ್ಟಿ ಮುಟ್ಟಿ ಆನಂದಿಸುತ್ತಿದ್ದ.
ಅದರ ಅಂದವನ್ನೆಲ್ಲ ಕಣ್ತುಂಬಿಕೊಂಡ ಮೇಲೆ ಹುಡುಗಿಯ ಕಡೆ ಕಣ್ಣು ಹಾಯಿಸಿದ. ಪುರಾಣದಲ್ಲಿ ಅಪ್ಸರೆಯ
ಕಲ್ಪನೆಯಿದೆಯಲ್ಲ, ನೀರಿನಷ್ಟು
ಸುಕೋಮಲ ನಿರ್ಮಲ ದೇಹವುಳ್ಳವರು ಅಂತ, ಬಹುಶಃ ಅದು ನಿಜವಿರಬೇಕು. ಭೂಮಿಮೇಲೆಯೆ ಅಂಥವಳಿರುವಾಗ
ಸ್ವರ್ಗದಲ್ಲೇಕೆ ಇಂಥ ಚೆಲುವೆಯರಿರಬಾರದು ಎಂದುಕೊಂಡ ರಾಮು. ಕಡುಗತ್ತಲಲ್ಲೂ ಅವಳ ಬಿಳುಪು
ಪ್ರಕಾಶಮಾನವಾಗಿತ್ತು. ಆ ಕಾರ್ಮುಗಿಲಿಗಿಂತಲೂ ಅವಳ ನೀಳ ಕೇಶ ಕಪ್ಪಾಗಿತ್ತು. ಹೊಳೆತುವ ತುಟಿಗಳು, ಮೊಣಚು ಗಲ್ಲ, ತುಟಿಯಂಚನ್ನು ಆಗಾಗ ಸವರುವ ಕೆಂಪು ನಾಲಿಗೆ
ಇನ್ನೂ ಏನೇನೋ ಅಂದ ನವ ನಿಧಿಯನ್ನು ರಾಮು ನೋಡಿ ಮೂಕಾದ. ಅವಳ ಅಂದದ ಆಸ್ವಾದದ ಗುಂಗಿನಿಂದ
ಹೊರಬರಲು ಕಾರಿನ ಮುಂದೆ ನೋಡಿದ, ಎತ್ತಿನ ಗಾಡಿಯಂತೆ ಬಂದಿದ್ದ ಕಾರು ಬೆಂಕಿ ವೇಗದಲ್ಲಿ
ಮುನ್ನುಗ್ಗುತಿದೆ!! 'ರೀ
ನಿಧಾನ' ಅಂತಲೇ ರಾಮು
ಅವರಿಬ್ಬರ ಮಧ್ಯದ ಮೌನ ಮುರಿದ. ಮಾತು ಕತೆ ಶುರಯವಾಯಿತು... ಕೇಳಿದಳು,'ಯಾಕೆ speed ಅಂದ್ರೆ ಅಷ್ಟು ಭಯಾನ?'
‘ ಭಯಾನಾ? ಹಂಗಂದ್ರೆ?'
‘ ಓಹ್ ನಿಮಗೆ ಭಯ ಅಂದ್ರೆನೆ ಗೊತ್ತಿಲ್ವಾ? smart'
‘ನಿಮ್ಮ ಹೆಸರು?'
‘ಹೇಳಿ ನೋಡೋಣ'
‘ how can i know your name?'
‘ ಓಹ್ english ಬೇರೆ ಬರುತ್ತೆ. ಹ ಹ ಹ grammer ಕೂಡ ಗೊತ್ತಿದೆ, great'
‘ ಅವಾಗ ನಿಮ್ಮನ್ನ ನಿಮ್ಮ bmwನ ನೋಡಿ ಹಾಗಾಯ್ತು. i know english well'
‘ ಅಯ್ಯೋ ಆಯ್ತು ಬಿಡಿ. ಅದರಲ್ಲೇನಿದೆ ದೊಡ್ಡ ವಿಷಯ? ಅಮೇರಿಕದಲ್ಲಿ ಕಸ ಬಾಚೋನು english ಮಾತಾಡ್ತಾನೆ'
‘ನಮ್ಮಲ್ಲಿ english ಬರದವನು ಕಸ ಬಾಚ್ತಾನೆ' ಜೋರಾಗಿ ನಕ್ಕಳು ಬಾಲಿಕೆ. ರಾಮು ಆ ನಗುವನ್ನು
ನೋಡುತ್ತಾ ಏನನ್ನೋ ಹುಡುವವನಂತೆ ಮಾಡಿದ. ಅವಳು ನಗುತ್ತಲೇ ಕೇಳಿದಳು 'ಏನು ಹುಡುಕ್ತಾ ಇದಿರಾ?'.ರಾಮು 'ಒಂದು ಬ್ಯಾಗ್ ಬೇಕು. ನೀವು ನಗುವಾಗ ಬೀಳೋ ಮುತ್ತು
ರತ್ನ ವಜ್ರ ವೈಢೂರ್ಯ ಆರುಸ್ಕೋತೀನಿ. ಇದೇ job ಕೊಟ್ಬಿಡಿ ನನಗೆ' ಅಂದ. ನಗು ಇನ್ನೂ ಜೋರಾಯಿತು. ರಾಮು ಅವಳ ಅಂದವನ್ನೆಲ್ಲ
ಕಣ್ಣಲ್ಲೇ.ಚಪ್ಪರಿಸುತ್ತಿದ್ದ. ಕೇಳಿದ 'ನಿಮ್ಮ ಹೆಸರೇಳಿ, ಏನಾಗುತ್ತೆ ನೋಡೋಣ. ಅವಳು 'ನೀವೆ ಹೇಳಿ ಏನಂತಿರೋ ಕೇಳಣ'.
‘ರೂಪಸಿ'
‘ ರೂಪಸಿ?! ಅಷ್ಟು ಹಳೆ ಹೆಸರೇಕೆ?'
‘ಅದು ಒಪ್ಪತ್ತೆ ನಿಮಗೆ. ಹಾಗಾಗಿ'
‘ಹೌದಾ...ಏನು ರೂಪಸಿ ಅರ್ಥ?'
‘ರೂಪ ಅಸಿ. ರೂಪ ಅಂದ್ರೆ ಅಂದ ಚಂದ ನಿನ್ನಂಥ ಮೈಮಾಟ.
ಅಸಿ ಅಂದ್ರೆ ಕತ್ತಿ. totally ಅಂದ
ಚಂದ ಮೈಮಾಟದ ಕತ್ತಿಯಿಂದ ನನ್ನಂಥವನ ಹೃದಯ ಇರಿವವಳು ಅಂತ'
‘ಓಹೋ.... ಇದು ಸ್ವಲ್ಪ ಜಾಸ್ತಿಯಾಯ್ತು'
‘ ನನಿಗಂತು ಏನು ಹೊಗಳಿದರು ಕಡಿಮೆ ಅನ್ನುಸ್ತಿದೆ'
‘ ನನ್ನದು ಬಿಡಿ, ನಿಮ್ಮ ಹೆಸರೇಳಿ'
‘ನೀವೆ guess ಮಾಡಿ'
‘ ಇದು ಮೋಸ. ನನ್ನ task ನಂಗೆ ಕೊಡೋದು ಅನ್ಯಾಯ'
‘ ಆಯ್ತು. ನಾನೇ ಹೇಳ್ತೇನೆ. ಅಭಿರಾಂ, ರಾಮು'
‘ ನಾನು ಜಾನಕಿ, ಜಾನು'
‘ನಿಜ ಹೇಳು ಚೆಲವೆ'
‘ಅರ್ರೆ, promise baba, ಆ pouch ಅಲ್ಲಿ ನನ್ನ dl ಇದೆ ನೋಡ್ಕೋ'
ರಾಮು ಅದನ್ನೆಲ್ಲ ಮಾಡಲಿಲ್ಲ. ನಂಬಿದ. ಹೀಗೇ ಮಾತು ಕಥೆ
ಮುಂದುವರೆಯಿತು.......
“ಬ್ರಹ್ಮ
ಸೃಷ್ಠಿ ಮಾಡುವಾಗ ಕೆಲವೊಂದಕ್ಕೆ ಸೌಂದರ್ಯ ಅನ್ನೋ materialನ mix ಮಾಡ್ತಾನೆ. ಅಂಥ itemಗಳು
full popular ಆಗ್ತಾವೆ.
ಒಮ್ಮೆ ಒಬ್ಬ ರಾಕ್ಷಸ ಆ ಸೌಂದರ್ಯವನ್ನ ಕದ್ದು ಚೆನ್ನಾಗಿರೋದೆಲ್ಲ ಅವನ ಮನೆಯಲ್ಲೇ ಇರಬೇಕು, ಬೇರೆಲ್ಲೂ
ಚೆಲುವು ಅನ್ನೋದು ಇರಲೇ ಬಾರದು ಅಂತ decide
ಮಾಡಿ ಆ ಸೌಂದರ್ಯದ boxನ ಕದ್ದ. ಆಗ ಬ್ರಹ್ಮ, ಅವನ
ತಂದೆ ಹತ್ತಿರ ಹೋಗಿ,
'ಅಪ್ಪಾ,
ನಾನು ಈ ಥರ ನೀನು ಕೊಟ್ಟಿದ್ದ ಸೌಂದರ್ಯದ boxನ
ಕಳ್ಕೊಂಡಿದಿನಿ. ಆ ರಾಕ್ಷಸ ಅದುನ್ನ ಕದ್ದಿದನೆ. ಅದು ಇಲ್ಲದೆ ಅಂದವನ್ನ ಸೃಷ್ಟಿಸಲಿಕ್ಕೆ
ಸಾಧ್ಯವೇ ಇಲ್ಲ,
please ಏನಾದರೂ ಮಾಡಿ ತಂದುಕೊಡು' ಅಂತ ಕೇಳಿಕೊಂಡ. ಆಗ ಬ್ರಹ್ಮನ father ವಿಷ್ಣು, ಆ
ರಾಕ್ಷಸನ ಜೊತೆ ಹೊರಾಡಿ ಆ boxನ
ತಂದ. ಹಾಗೆ ತರುವಾಗ ಭೂಮಿ ಮೇಲೆ ಒಂದೆರಡು ಹನಿ ಬಿತ್ತು. ಇವತ್ತಿಗೂ ಭೂಮಿಲಿ ಅದಿಕ್ಕಿಂತ ಸೌಂದರ್ಯ
ಎಲ್ಲೂ ಇಲ್ಲ. ಅದು ಯಾವುದು ಗೊತ್ತಾ?'
ರಾಮು ಕೇಳಿದ. ಜಾನು ಮುಂಗುರಳನ್ನು ಕಿವಿ ಹಿಂದೆ ತಳ್ಳಿ 'ಗೊತ್ತಿಲ್ಲ.
ಎಲ್ಲಿದೆ?' ಅಂದಳು.
'ಇಗೋ ನನ್ನ ಪಕ್ಕದಲ್ಲಿ' ಅಂತ
ಜಾನು ಕಡೆ ಬೆರಳು ಮಾಡಿದ. ಜಾನಕಿ ನಾಚಿ 'ಸಾಕು ಸಾಕು' ಎನ್ನುತ್ತ
ಆ ತುಂಟು ಬೆರೆಳಿಗೊಂದು ಏಟು ಹಾಕಿದಳು. ಅವಳ ಸುಕೋಮಲ ಕೈಯ ಸ್ಪರ್ಷದಲ್ಲಿ ಸುಳಿಮಿಂಚು ವಿದ್ಯುತ್
ಹರಿಸಿದ ಅನುಭೂತಿಯಾಯ್ತು ರಾಮುವಿಗೆ. ಆ ಸ್ಪರ್ಷದ ಆನಂದ ಸವಿಯುತ್ತ ಕೆಲ ಹೊತ್ತು, ತುಟಿಯಂಚಲಿ
ನಗೆ ಹೊತ್ತು ಹನಿ ಜಿನುಗುತ್ತಿದ್ದ ಆಗಸದೆಡೆ ನೋಡುತ್ತ ಅಲ್ಲಿ ಯಾರೋ ಬರಿದದ್ದನ್ನು ಓದುವವನಂತೆ
ಗುನುಗಿದ 'ಪ್ಯಾರ್
ಹುವ ಇಕರಾರ್ ಹುವಾ
ಹೈ,
ಪ್ಯಾರ್ ಸೆ ಫಿರ್ ಕ್ಯೂ ಡರ್ತಾ ಹೈ ದಿಲ್....' ಜಾನು
ಮುಂದುವರೆಸಿದಳು 'ಕಹ್ತ
ಹೈ ದಿಲ್, ರಸ್ತಾ
ಮುಶ್ಕಿಲ್
ಮಾಲೂಮ್ ನಹಿ ಹೈ ಕಹಾ ಮನ್ಝಿಲ್' ಇಬ್ಬರೂ ಕೂಡಿ ಹೇಳಿದರು. 'ಪ್ಯಾರ್
ಹುವಾ ಹೈ....'
ರಾಮು ಕೇಳಿದ 'ಜಾನು, ಈ
ಕಡೆ ಎಲ್ಲಿಂದ ಬರ್ತಾ ಇದಿಯಾ?'
ಜಾನು ಮುಖದಲ್ಲಿ ಈವರೆಗೂ ಇದ್ದ ನಗು ಸ್ವಲ್ಪ ಮಾಯವಾದಂತೆ ತೋಚಿತು. ರಾಮು
ಕೇಳಬಾರದ್ದನ್ನೇನಾದರೂ ಕೇಳಿದೆನಾ ಎಂದುಕೊಂಡ ತನ್ನ ಪ್ರಶ್ನೆಯನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡ, ಸರಿಯಾಗಿಯೇ
ಇತ್ತು. ಜಾನು ಸ್ವಲ್ಪ ಹೊತ್ತು pause
ನೀಡಿ ಬಳಿಕ 'ಚಿತ್ರ
ದುರ್ಗದಿಂದ'. ರಾಮುಗೆ
ಖುಷಿ, ಅವನು
ಹೇಳಿದ 'ಓಹ್
ನಮ್ಮೂರು. ಅಲ್ಲೇನು relations
ಇದಾರಾ?'
ಅಂತ. 'ಇಲ್ಲ.
ಇದ್ದ ಒಂದು ಸಂಬಂಧ ಕೂಡ ಕಡೆದು ಹೋಯ್ತು. ಮದುವೆ ಮನೇಲಿ ಭಾವಿ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು
ಬರ್ತಿದೀನಿ' ಅಂದಳು
ಜಾನಕಿ. ದನಿ ಸ್ವಲ್ಪ ಗದ್ಗದವಾಗಿತ್ತು. 'ಯಾಕೆ ಜಾನು? ಏನಾದರು
ಸಮಸ್ಯೆ ಆಗಿದ್ಯಾ? ಏನು
ಅಂತ ಕೇಳಬಹುದ?' ಅಂದ
ರಾಮು. 'ಕೇಳು' ಅಂದಳು
ಜಾನು. ರಾಮು 'ಹೇಳು' ಎಂದು
ಕೇಳಿದ. ಜಾನಕಿ ಕಾರನ್ನು ರಸ್ತೆ ಪಕ್ಕದಲ್ಲಿ indicator on ಮಾಡಿ ನಿಲ್ಲಿಸಿ ಕೆಳಗಿಳಿದಳು. ಈ ಕಡೆಯಿಂದ
ರಾಮು ಇಳಿದ. ಜಾನಕಿ ಕಣ್ಣಲ್ಲಿ ನೀರು ತುಂಬಿತ್ತು ಆದರೂ ಅದನ್ನು ತಡೆಹಿಡಿದು ಹೇಳಿದಳು,
'... ನಾನು ಒಬ್ಬಳೆ ಮಗಳು, ನಮ್ಮಪ್ಪ
ಅಮ್ಮನಿಗೆ ನಾನೇ ಜಗತ್ತು. ತುಂಬಾ ಮುದ್ದಿನಿಂದ ಬೆಳಸಿದ್ರು. ಹುಟ್ಟಿನಿಂದಲೂ ಹಣಕ್ಕೇನು
ಕೊರತೆಯಿಲ್ಲ. ರಾಣಿ ಥರ ಇದ್ದೆ. ಕೆಲವು ತಿಂಗಳ ಹಿಂದೆ, ಅದೇ ಮದುವೆ ಅಂದ್ನಲ, ಆ
ಮದುವೆ ಹುಡುಗ ನಮ್ಮ ಮನೆಗೆ ಬಂದು ನನ್ನ ಮದುವೆ ಮಾಡೋದಕ್ಕೆ ಒಪ್ಪಿಕೊಂಡಿದ್ದ. ಅವನ ಮನೆಯವರೂ ಸಹ.
engagement ಆಗಿತ್ತು.
ಎಲ್ಲರಿಗೂ ವಿಷಯ ಗೊತ್ತಾಗಿತ್ತು. ಆದರೆ ಇದ್ದಕ್ಕಿದ್ದಂತೆ ನಿನ್ನ ಜಾತಕ ಸರಿಯಿಲ್ಲ. ಹಾಗೆ ಹೀಗೆ
ಅಂತ ಕುಂಟು ನೆಪ ಹೇಳಿ ಮದುವೆ cancel
ಮಾಡಿದ್ರು. ಇವತ್ತು ಬೇರೆ ಹೆಣ್ಣಿನ ಜೊತೆ ಅವನ ಮದುವೆ. ಅಪ್ಪಾಜಿ ಬಲವಂತ
ಮಾಡಿ ಇಲ್ಲಿಗೆ ಕಳೆಸಿದ್ರು,
ಅವನು ಕೊಟ್ಟಿದ್ದ ಉಂಗುರ, watch ಎಲ್ಲಾ return ಮಾಡೋಕೆ. ಅವನು ಹೋದ ಅಂತ ನನಗೇನು ಬೇಜಾರಿಲ್ಲ.
ಬದಲಾಗಿ ಬಾಗಲಿಗೆ ಬಂದ ಪೀಡೆ ಬೆನ್ನು ಹತ್ತಿಲ್ವಲ್ಲಾ ಅನ್ನೋ ನೆಮ್ಮದಿಯಿದೆ. ಆದರೆ ಅಪ್ಪ
ಅಮ್ಮನನ್ನ ನೆನಸ್ಕೊಂಡ್ರೆ ಹಿಂಸೆ ಆಗುತ್ತೆ...' ಅನ್ನುತ್ತಾ ಕಣ್ಣೀರು ಚೆಲ್ಲುತ್ತಿದ್ದ ಜಾನಕಿಯ
ಪಕ್ಕ ನಿಂತು, ಹೆಗಲ
ಮೇಲೆ ಕೈ ಹಾಕಿ 'ಹೇ
ಜಾನು, ಏನಿದು? ಆ
ತಿರುಬೋಕಿ ಯಾರೋ ಮೋಸ ಮಾಡಿದನೆ ಅಂತ ನೀನ್ ಅಳೋದೆ, ಛೆ. ಸುಮ್ಮನಿರು' ಎಂದು
ಸಮಾದಾನ ಮಾಡುತ್ತಿದ್ದ.
ಮೂಗಿನಿಂದ ಸಿರ್ರೆಂದು
ಸಿಂಬಳ ಎಳೆದುಕೊಂಡ ಜಾನು 'back
seat ಅಲ್ಲಿ ಸಣ್ಣ ಬ್ಯಾಗ್ ಇದೆ, ತರ್ತೀಯ please..?ಎಂದಳು. ಅವಳ ಮಾತು ಮುಗಿಯುವುದರಲ್ಲಿ ರಾಮು
ಓಡೋಡಿ ಹೋಗಿ ಆ bag
ತಂದ. ಜಾನು ಅದರೊಳಗಿಂದ imported wine ತೆಗೆದಳು. ರಾಮು ಗಾಬರಿಯಾಗಿ ಹೋದ, ಮೂರ್ಛೆ
ಬೀಳುವುದೇ ಬಾಕಿ. 'ಬೇಕ
ರಾಂ? swissದು, ತುಂಬಾ
ಚೆನಾಗಿರುತ್ತೆ. wanna
try' ಅಂದಳು. ಹುಡುಗಿಯ ಮುಂದೆ ಮಾನ ಹೋಗಬಾರದಲ್ಲ. ರಾಮು ಕೂಡ ಅವಳ ಜೊತೆಯಾಗಲು
ಅಣಿಯಾದ. ಜಾನು ಏನೋ ಹೊಳೆದವಳಂತೆ ಹೋಗಿ ಎರಡು glass ತಂದಳು, ರಾಮುವಿಗೊಂದು ತನಗೊಂದು. ಎರಡಕ್ಕೂ ಸಮವಾಗಿ wine ಸುರಿದಳು.
cheers ಎನ್ನುತ್ತ
ಇಬ್ಬರೂ ಲೋಟಗಳ ತುದಿ ತಾಕಿಸಿದರು. ಜಾನು ಒಮ್ಮೆಗೇ ಅಷ್ಟನ್ನೂ ಕುಡಿದಳು, ರಾಮು
ಅವಳನ್ನೇ ನೋಡುತ್ತಿದ್ದ. ಅವನ ನೋಟ ನೋಡಿದ ಜಾನು 'ರಾಮು, ಹುಡುಗಿ ಕೈ ಕೊಟ್ರೆ ನೀವು ಗಡ್ಡ ಬಿಡ್ಬೋದು, cigarette ಸೇದಬಹುದು
ನಾವು at least
wine ತಗೋಬಾರ್ದ?
ಹಾಗ್ ಯಾಕ್ ನೋಡ್ತಿದ್ದೀಯ?' ಅಂದಳು. ರಾಮು ಸಾವರಿಸಿಕೊಂಡು ಹೇಳಿದ 'ಏನಿಲ್ಲ, ಈ
wine glassನ
ಹೀಗ್ ಇಟ್ಕೊಂಡಿದ್ರೆ ನಿನ್ನ ಆ ನಡುವನ್ನೇ ಹಿಡಿದುಕೊಂಡಿದಿನೇನೋ ಅನ್ನುಸ್ತಿದೆ. ನೋಡು ಬೇಕಿದ್ರೆ, same size' ಅಂದ.
ಜಾನು ಕಣ್ಣೊರೆಸಿಕೊಂಡು ನಕ್ಕಳು. ರಾಮುವಿಗೆ ಅಳಾರವಾಯಿತು.
ಇಬ್ಬರೂ ಕಾರಿನ bannet ಮೇಲೆ
ಕೂತು wineಅನ್ನು
ವೈನಾಗಿ ಹೀರುತ್ತಾ ಮಾತಿನಲ್ಲಿ ಮೈಮರೆತರು, ಗತವನ್ನೂ ಮರೆತರು. ಜನುಮಾಂತರದ ಗೆಳಯರಾದರು.
ಊರಿಗೆ ಹೋಗಬೇಕೆಂಬ ತಿಳುವಳಿಕೆ ಬರುವ ವೇಳೆಗೆ ರಾಮು ಕಾರಿನ ಚಕ್ರಕ್ಕೆ ಆನಿಕೊಂಡು ಮಲಗಿದ್ದ, ಜಾನು
ಅವನ ಎದೆ ಮೇಲೆ ಮಲಗಿದ್ದಳು!!! ಮುಗೀತು. ಇನ್ನು
ಅವರಿಬ್ಬರ ಮಧ್ಯೆ ಯಾವ ಮುಚ್ಚು ಮರೆಯೂ ಇರಲಿಲ್ಲ. ಮತ್ತೆ ಪ್ರಯಾಣ ಶುರುವಾಯಿತು. ಎಗ್ಗಿಲ್ಲದೆ
ಮಾತು ಕತೆ ಸಾಗಿತು. ಬಾಲ್ಯದ ತುಂಟತನ,
ಯೌವನದ ಹುಡುಗುತನ, ಮನದ ಮಂಥನ ಎಲ್ಲವೂ ಅವರ ಸಂಭಾಷಣೆಯಲ್ಲಿ ಇಣುಕಿ
ಹೋದವು. ಕೆಲವು ಸತ್ಯ,
ಕೆಲವು ಸುಳ್ಳು ಎಲ್ಲವೂ ಆ ಸಂವಹನದಲ್ಲಿ ಸೇರಿದ್ದವು. ಭುಜಗಳು
ಅಂಟುಕೊಂಡಿದ್ದವು.
'ಥೂ ಕರ್ಮ, ಬೆಂಗಳೂರು ಬಂದೇ ಬಿಟ್ಟಿತು' ಶಪಿಸಿದ
ರಾಮು. ನಕ್ಕಳು ಜಾನು. 'ನೀನು
ಯಾವ ಕಡೆ ಹೋಗೋದು?'
ರಾಮು ಜಾನಕಿಯನ್ನು ಕೇಳಿದ. 'ಚಮರಾಜಪೇಟೆ. ನೀನು?' ವಿಚಾರಿಸಿದಳು
ಜಾನು. 'ಇಲ್ಲೇ
ಯಶವಂತಪುರ. ನನ್ನನ್ನ ಮನೆಗೆ ಬಿಟ್ಟು ಹೋಗುತ್ತೀಯಾ? if you dont mind' ಅಂದ ರಾಮು. 'mind ಕೆಡಿಸಿಕೊಳ್ಳೋದಾಗಿದ್ದರೆ
ಕಾರಲ್ಲೇ ಕೂಡಿಸಿಕೊಳ್ತಿರಲಿಲ್ಲ'
ಅವಾಝ್ ಹಾಕಿದಳು. 'ಆಯ್ತೆ ಚೆಲುವೆ, ಮನೆಗೆ
ಬಿಡು ನನ್ನ' ಅಂದು
ಸುಮ್ಮನೆ ಕುಳಿತ. ಮಾತು ಸ್ವಲ್ಪ ಕಡಿಮೆಯಾಗುತ್ತಾ ಬಂತು. ಯಾಕೆಂದರೆ ಇಂಥ ಮೋಹಕವಾದ ಯಾನ
ಕೊನೆಗೊಳ್ಳುತ್ತದಲ್ಲಾ ಎಂಬ ಬೇಸರದಲ್ಲಿ. ರಾಮು ತನ್ನ ಮನೆ ದಾರಿಯನ್ನ ತೋರಿಸುತ್ತಿದ್ದ.
ಅಂತೂ ಮನೆ ಬಂತು. ದೊಡ್ಡ ಮನೆಯೆ. ಎರಡಂತಸ್ತಿನದು. ಒಳಗೆ ಹೋಗಲು ರಾಮುಗೆ ಮನಸ್ಸಿಲ್ಲ. ಕಾರು
ಹತ್ತುವಾಗ ಹೂವಿನಷ್ಟು ಹಗುರವಿದ್ದ ಬ್ಯಾಗು ಈಗ ಹೆಣಭಾರವಾದಂತಿದೆ. ಜಾನು ಮುಖ ಬಾಡಿ ಹೋಗಿದೆ.
ಕಷ್ಟ ಪಟ್ಟು ಕೆಳಗಿಳಿದ ರಾಮು 'ಹ್ಮ್...
ಬರ್ಲಾ...?' ಅಂದ
‘ಬಾ...'
‘ ಹೋಗಿ ಬರ್ಲಾ ಅಂದೆ...'
‘ಹೋಗ್ಬೇಡ... ಬಾ ಅಂದೆ'
‘ ಈಗ ಬೇಡ, ಸಿಗೋಣ ಮತ್ತೆ'
‘ಯಾವಾಗ?'
‘ಆದಷ್ಟು ಬೇಗ'
‘ ಅದೇ, ಎಷ್ಟು ಬೇಗ?'
‘ನಾಳೆ? yeah ನಾಳೆನೆ. rock resortಗೆ ಹೋಗೋಣ. ಅಲ್ಲಿ ಎಲ್ಲಾ ಥರ enjoy ಮಾಡಬಹುದು'
‘ಎಲ್ಲಾ ಥರ ಅಂದ್ರೆ....?'
’ ಎಲ್ಲಾ ಥರ ಅಂದ್ರೆ..ಅದೇ ನಿನ್ನ ಮನಸ್ಸಲ್ಲಿ
ಈಗ ಯಾವ ಯಾವ ಥರನೋ ಬಂತಲ್ಲ ಹಾಗೆ'
ನಗುತ್ತಾ-ನಾಚುತ್ತಾ 'ಅಲ್ಲಿ
ತನಕ ಏನೂ ಕೊಡಲ್ವಾ....?'
ಅಂದಳು.
ರಾಮುಗೆ ಒಳಗೊಳಗೇ ಖುಷಿ.
'ನನಗೂ
ಕೊಡೊ ಆಸೆ, ಆದರೆ
ಭಯ'
‘ ನನಗೂ ಪಡೆದುಕೊಳ್ಳೋ ಆಸೆ, ಭಯವೇನಿಲ್ಲ'
ರಾಮುಗೆ ಧೈರ್ಯ ಎಲ್ಲಿಂದ
ಎದ್ದು ಬಂತೋ ಏನೋ, ನೇರವಾಗಿ
ಅವಳು ಕೂತಿದ್ದ ಕಡೆ ಹೋಗಿ ಅವಳ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ 'ನನಗೆ
ಕೊಡೋದಕ್ಕಿಂತ ಪಡೆಯೋದೆ ಇಷ್ಟ. ನೀನು ಕೊಟ್ಟರೂ ನಾನು ಕೊಟ್ಟರೂ ಅದೇನು ಬೇರೆ ಅಲ್ಲ. ನೀನೆ ಕೊಡು' ಅಂದ.
ನಾಚುತ್ತಾ ಹುಡುಗಿ ಹೇಳಿದಳು 'ಸರಿ, ಕಣ್ಮುಚ್ಚು.
ನನಗೆ ನಾಚಿಕೆಯಾಗುತ್ತೆ'
ಅಂದಳು. ಕಣ್ಮುಚ್ಚಿದ ರಾಮು ಸಿಹಿಮುತ್ತಿನ ಮುತ್ತಿಗೆಗಾಗಿ ತುಟಿಯರಳಿಸಿ
ನಿಂತ. ಕ್ಷಣಗಳುರುಳಿದವು ಯಾವ ಅನುಭವವೂ ಆಗಲಿಲ್ಲ. ತುಟಿಯನ್ನು ಸ್ವಲ್ಪ ಮುಂದೆ ತಳ್ಳಿದ, ಯಾವ
ತುಟಿಯೂ ತಾಕಲಿಲ್ಲ. ಕಣ್ಣು ಬಿಟ್ಟು ನೋಡಿದರೆ ಮುಂದೆ ಕಾರು ಇಲ್ಲ, ಹುಡುಗಿಯೂ
ಇಲ್ಲ, ಅವನ
ಮನೆಯೂ ಇಲ್ಲ! ಅವನ cbz
ಎಲ್ಲಿ ಕೆಟ್ಟು ನಿಂತಿತ್ತೋ ಅಲ್ಲೇ ಇದ್ದಾನೆ!! ಎಲ್ಲವೂ ಕನಸು, ಆ
ಹುಡುಗಿ... ಥೋ ಅವಳೂ ಕನಸು. 'ಏನ್
ಸುಡುಗಾಡು ಕನಸೋ ಅವನ**'
ಎಂದುಕೊಂಡು ಕತ್ತಲೆಯನ್ನೂ ಆ ಕನಸನ್ನೂ ಬಾಯಿತುಂಬ ಬೈದುಕೊಳ್ಳುತ್ತಾ
ಮುಂಜಾನೆಗಾಗಿ ಕಾದ...
ಬೆಳಕು
ಹರಿಯಿತು.
ದಾರಿ ಕಂಡಿತು. ಗಾಡಿ ತೆಗೆದ ರಾಮು ಎಲ್ಲಿಯೂ ನಿಲ್ಲಿಸದೇ
ಮನೆಗೆ ಬಂದ. ಬಾಗಿಲು ತಟ್ಟಿದ. ಇನ್ನೂ 5 ವರೆ. ಯಾರೂ ಎದ್ದಿರಲಿಲ್ಲವೇನೋ, ಬಾಗಿಲನ್ನು
ತುಸು ತಡವಾಗಿ ತೆಗೆದರು. ರಾಮು frustrate
ಆದವನಂತೆ ಮನೆಯೊಳಗೆ ಹೋಗಿ sofa ಮೇಲೆ ಮಲಗಿದ. ಅಮ್ಮ ಕೇಳಿದಳು 'ಟೀ
ಬೇಕಾ?'. 'ಹ್ಮ್....' ಅಂದ
ಗಡುಸಾಗಿ. tv on ಮಾಡಿದ. m.tv ಬರುತ್ತಿತ್ತು.
ರಾತ್ರಿ ಹಾಡಿದ ಹಾಡು 'ಪ್ಯಾರ್
ಹುವಾ...' ಬರುತ್ತಿತ್ತು.
' ಇದು
ಬೇಕಿತ್ತಾ...' ಅಂದುಕೊಂಡ
ರಾಮು channel
change ಮಾಡುತ್ತಾ tea
ಬರುವ ವರೆಗೆ time
pass ಮಾಡುವವನಿದ್ದ. ಕನ್ನಡ news channelಗೆ ಬರುವ ವೇಳೆಗೆ tea ಬಂತು.
tea ಹೀರುತ್ತಿದ್ದ
ರಾಮುವಿಗೆ ಕೇಳಿಸಿತು 'ನಿನ್ನೆ
ರಾತ್ರಿಯ ಭೀಕರ ರಸ್ತೆ ಅಪಘಾತದಲ್ಲಿ bmw
ಕಾರಲ್ಲಿ ಕುಡಿದು ಬರುತ್ತಿದ್ದ ಜಾನಕಿಯೆಂಬ ಹುಡುಗಿ ಸಾವನ್ನಪ್ಪಿದ್ದಾಳೆ' ನಿಟ್ಟುಬಿದ್ದ
ರಾಮು ಮೈ ಮೇಲೆ tea
ಚಲ್ಲಿತು,
cup ಕೆಳಗೆ ಬಿದ್ದು ಒಡೆಯಿತು. tv ಕಡೆ ನೋಡಿದರೆ ರಾತ್ರಿ ತಾನು ನೋಡಿದ ಚೆಲುವೆಯೇ
ಇಲ್ಲಿ ಹೆಣವಾಗಿದ್ದಾಳೆ!!!
ರಾಮು ತನ್ನಲ್ಲೇ ತನಗೆ
ಹೇಳಿಕೊಂಡ ' ಹಾಗಾದರೆ
ರಾತ್ರಿ ನಾನು ನೋಡಿದ್ದು ಕನಸಾ..??!!'.
ಪಕ್ಕದಿಂದ ಕೇಳಿಸಿತು,
'ಅಲ್ಲ
ರಾಮು... ರಾತ್ರಿ ನಡೆದದ್ದೆಲ್ಲಾ ನಿಜ'. ಹೇಳಿದಳು ಜಾನು.
ನಾದೀ